Category: ಕನ್ನಡ

  • ಮಹಿಳಾ ಕಾರ್ಮಿಕರ ಮೇಲಾಗುತ್ತಿರುವ ಆತ್ಯಾಚಾರಗಳಿಗೆ ಧಿಕ್ಕಾರ

    ದೇಶದ ಆರ್ಥಿಕತೆಗೆ ಬಹುದೊಡ್ದ ಕೊಡುಗೆಯನ್ನೇ ನೀಡುತ್ತಿರುವ ಗಾರ್ಮೆಂಟ್ಸ್ ಕಾರ್ಮಿಕರ ಜೀವನ ಪರಿಸ್ಥಿತಿಯ ಬಗ್ಗೆ ಕಳೆದೆರೆಡು ಸಂಚಿಕೆಗಳಲ್ಲಿ ಓದಿದ್ದೀರಿ.. ಕಾರ್ಮಿಕರಾಗಿ ಹಾಗೂ ಮಹಿಳೆಯರಾಗಿ ಇವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪದೇ ಪದೇ ಅಲ್ಪವಿರಾಮ ಬೀಳುತ್ತಲೇ ಇದೆ. ಇದಕ್ಕೆ ನೈಜ ಉದಾಹರಣೆ ಇಲ್ಲಿದೆ. ಆಕೆ ಮೈಸೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಟೈಲರ್ ಆಗಿ ದುಡಿಯುತ್ತಿರುವ 38 ವಯಸ್ಸಿನ ಮಹಿಳೆ. ಇಲ್ಲಿ ಕಳೆದ 3 ವರ್ಷಗಳಿಂದ ದುಡಿಯುತ್ತಿದ್ದಾಳೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಆಕೆಗಿರುವ ಒಟ್ಟಾರೆ ಅನುಭವ ಹನ್ನೊಂದು ವರ್ಷಗಳದ್ದು. ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ,…

  • ದುಡಿಯುವ ಸ್ಥಳಗಳಲ್ಲಿ ಮಕ್ಕಳ ಲಾಲನೆ-ಪಾಲನೆ

    ದಿಯರ ಹಾಗೂ ಶಿಶುಪಾಲನಾ ಕೇಂದ್ರಗಳ ವ್ಯವಸ್ಥೆ ನಿರ್ಮಾಣವಾಗಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 30ಕ್ಕಿಂತ ಅಧಿಕ ಮಹಿಳಯರಿದ್ದರೆ, ಅಲ್ಲಿ ಬಾಲವಾಡಿ ಇರಲೇಬೇಕೆಂದು ಕಾನೂನು ಹೇಳುತ್ತದೆ. ಆದರೆ, 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರರು ದುಡಿಯುವ ಕಾರ್ಖಾನೆಗಳಲ್ಲೂ ಬಾಲವಾಡಿ ವ್ಯವಸ್ಥೆ ಕಾಣಸಿಗುವುದಿಲ್ಲ. ಇದ್ದರೂ ಅದು ಸಂಪೂರ್ಣ ಅಸಮರ್ಪಕವಾಗಿರುತ್ತದೆ. ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ, ಮಹಿಳಾ ಕಾರ್ಮಿಕರ ಹೆರಿಗೆ ರಜೆ 3 ತಿಂಗಳು. ಆದರೆ, ಬಾಲವಾಡಿಗೆ ಮಕ್ಕಳನ್ನು ಕರೆತರಲು ನಿಗದಿ ಮಾಡಿರುವ ವಯೋಮಿತಿ 6 ತಿಂಗಳಿಂದ 6 ವರ್ಷ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅನೇಕ ತಾಯಂದಿರು…

  • ಕರ್ನಾಟಕ ‘ಮೌಢ್ಯ ರಾಜ್ಯ’ ವಾಗದಿರಲಿ

    ಜಾತಿವಾದಿಗಳಿಗೆ ಧಿಕ್ಕಾರ * ಮಡೆಸ್ನಾನ ಮೌಢ್ಯದ ಪರಮಾವಧಿ ರಾಜ್ಯದಲ್ಲಿ ಮೌಢ್ಯದ ಪರಮಾವಧಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದೇ ಅಡೆತಡೆ ಇಲ್ಲದೆ ಸಾಗಿದೆ. ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಅನಿಷ್ಟ ಆಚರಣೆಗಳು ನಡೆಯುತ್ತಿದ್ದು ಈ ಮೂಲಕ ಕರ್ನಾಟಕ ಭ್ರಷ್ಟಾಚಾರ, ಕೋಮುವಾದ, ಮತ್ತು ಜಾತಿವಾದಗಳಂತಹ ಕುಖ್ಯಾತಿಗಳೊಂದಿಗೆ ‘ಮೌಢ್ಯ ರಾಜ್ಯ’ವಾಗಿಯೂ ವಿಜೃಂಭಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶಿಷ್ಟ ಆಚರಣೆಯ ನಾಮಧೇಯದಲ್ಲಿ ನಡೆಯುತ್ತಿರುವ ಹರಕೆಯ ಮಡೆಸ್ನಾನ ಅವೈಜ್ಞಾನಿಕ ಆಚರಣೆ ಎಂಬುದು ನಿಸ್ಸಂದೇಹ. ಪರಂಪರಾಗತವಾಗಿ ನಿಮ್ನ ಜಾತಿಯ ಜನರನ್ನು ಮೌಢ್ಯದ ಅಂಧಕಾರದ ಅಧೀನದಲ್ಲೇ…

  • ದೇಶವೆಂದರೆ ನಿರ್ಜೀವ ಗಡಿರೇಖೆಗಳಲ್ಲ ! ದೇಶವೆಂದರೆ ಆರೋಗ್ಯವಂತ ಪ್ರಜೆಗಳು !!

    ಎರಡು ದಶಕಗಳ ನವ ಉದಾರೀಕರಣ ಭಾರತದ ಬಹು ಜನರನ್ನು ಅನಾರೋಗ್ಯದ ಅಧೋಗತಿಗೆ ತಳ್ಳಿದೆ “ಅಪೌಷ್ಟಿಕತೆ ರಾಷ್ಟ್ರ್ರೀಯ ಅವಮಾನ” ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್ ರು ಉದ್ಗಾರ, ಧೀರ್ಘ ಪ್ರಜ್ಞಾಹೀನ ಸ್ಥಿತಿಯಲ್ಲಿದ ರೋಗಿಯೊಬ್ಬ ಧಿಡೀರನೆ ಎಚ್ಚರಗೊಂಡು ತನ್ನ ನಿಶ್ಯಕ್ತತೆಯ ಬಗ್ಗೆ ಅಚ್ಚರಿಯಿಂದ ಹಲುಬಿದಂತಿದೆ. ಇದೀಗ ಕಳೆದ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ಮೇಧಾವಿಗಳಾದ ಮನಮೋಹನ್-ಮಾಂಟೆಕ್-ಮುಖರ್ಜಿ ಹಾಗೂ ಪ.ಚಿದಂಬರಮ್ ಎಂಬ ಚತುಷ್ಪಾದ ಜೀವಿಗಳ, ದಿನವೊಂದಕ್ಕೆ ನಗರಗಳಲ್ಲಿ 32 ರೂಪಾಯಿ ಹಾಗೂ ಹಳ್ಳಿಗಳಲ್ಲಿ 27 ರೂಪಾಯಿಗಳ ಆದಾಯವಿದ್ದಲ್ಲಿ ಅದು ಸುಖ-ಸಮೃದ್ಧಿಯ…

  • ಆಹಾರ ಭದ್ರತೆಗೆ ಕುತ್ತು : ತೀವ್ರ ಜನ ಪ್ರತಿಭಟನೆ

    ಸಂಸತ್ತಿನ ಕಳೆದ ಮುಂಗಾರು ಅಧಿವೇಶನದಲ್ಲಿ ಮಂಡನೆಯಾದ ಆಹಾರ ಭದ್ರತಾ ಕರಡು ಮಸೂದೆಯನ್ನು ವಿರೋಧಿಸಿ ರಾಜ್ಯ ಆಹಾರ ಹಕ್ಕುಗಳ ಆಂದೋಲನ ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆಹಾರ ಭದ್ರತಾ ಮಸೂದೆ-2011 ಬಡಜನರ ವಿರೋಧಿ ಕಾಯಿದೆಯಾಗಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯಿದೆಯನ್ನು ವಿರೋಧಿಸಿ ಕೂಗುತ್ತಿದ್ದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ರಾಜ್ಯದ ನಾನಾ ಜಿಲ್ಲೆಗಳಿಂದ 300 ಮಂದಿ ಆಗಮಿಸಿದ್ದರು. ಕಾಯಿದೆಯು ಯಾವುದೇ ಕಾರಣಕ್ಕೂ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯಲು ಬಿಡಬಾರದೆಂಬ ಉದ್ದೇಶದಿಂದ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ…

  • ಮರಣ ದಂಡನೆ ನಿಲ್ಲಲಿ

    ಮರಣ ದಂಡನೆಯ ವಿರುದ್ಧ ನಡೆಯುತ್ತಿರುವ ಈ ಹೋರಾಟ ನಾನು ಗಳಿಸುವ ಗೆಲುವು ಸೋಲುಗಳಿಂದ ಮಾತ್ನಿರ್ಧಾರವಾಗದು. ಜಗತ್ತಿನಾದ್ಯಾಂತ ಜೈಲುಗಳಲ್ಲಿ ಕೊಳೆಯುತ್ತಿರುವ ಪ್ರತಿ ನಿರ್ಧೋಶಿಷಿ ಅಮಾಯಕ ಮನುಜನೂ ನಮ್ಮ ಒಟ್ಟಾರೆ ಪ್ರಯತ್ನದಿಂದ ರಕ್ಷಿತನಾಗಬೇಕು. ಈ ನ್ಯಾಯ ಸಮ್ಮತವಲ್ಲದ ವ್ಯವಸ್ಥೆಯನ್ನು ಪ್ರತಿ ನಗರದಿಂದ, ಪ್ರತಿ ರಾಜ್ಯಗಳಿಂದ ಮತ್ತು ಪ್ರತಿ ದೇಶಗಳಿಂದ ತೆಗೆದು ಹಾಕುವುದು ಒಂದು ಜರೂರಿ ಅನಿರ್ವಯ. (ಟ್ರಾಯ್ ಡೇವಿಸ್, ಸೆಪ್ಟೆಂಬರ್ 21, 2011ರಂದು ಅಮೇರಿಕಾದಲ್ಲಿ ಗಲ್ಲಿಗೇರಿಸಲಾಯಿತು) ಮರಣ ದಂಡನೆಯ ವಿಚಾರ ವಿಶ್ವದಾದ್ಯಂತ ತೀವ್ರ ಗೊಂದಲವನ್ನುಂಟುಮಾಡುವ ಬಹುಚರ್ಚಿತ ವಿಷಯ. ಈ ವಿವಾದಿತ…

  • ಭಾರತ ಸೇನೆಯ ವಿಶೇಷ ಅಧಿಕಾರ ಕೊನೆಯಾಗಲಿ

    ಈ ತಿಂಗಳ ನವೆಂಬರ್ 4ರಂದು, ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನುರವರ ಉಪವಾಸ ಸತ್ಯಾಗ್ರಹಕ್ಕೆ ಹನ್ನೊಂದು ತುಂಬಿತು. ಅಂದಿನಿಂದ ಇಂದಿನವರೆಗೆ ಈ ಅಪ್ರತಿಮ ಹೋರಾಟಗಾರ್ತಿ ಯಾವುದೇ ಆಹಾರ-ಪಾನೀಯಗಳನ್ನು ಮುಟ್ಟಿಲ್ಲ, ಆಕೆಯನ್ನು ಆತ್ಮಹತ್ಯೆಗೆ ಪ್ರಯತ್ನಪಟ್ಟ ಆರೋಪದ ಮೇಲೆ ಬಂಧನದಲ್ಲಿರಿಸಿ, ಬಲವಂತದಿಂದ ಮೂಗಿನ ಮೂಲಕ ದ್ರವವನ್ನು ನೀಡಲಾಗುತ್ತಿದೆ. ಜಗತ್ತಿನ ಯಾವುದೇ ದೇಶದ ಹೋರಾಟದ ಚರಿತ್ರೆಯಲ್ಲು ಈ ಮಟ್ಟದ ಸುಧೀರ್ಘ ಅಖಂಡ ಉಪವಾಸ ಹಾಗು ನೋವುಂಡಿರುವ ಹೋರಾಟಗಾರ/ಗಾರ್ತಿಯರ ನಿದರ್ಶನವಿಲ್ಲ. ಇಂದು ಇರೋಮ್ ಶರ್ಮಿಳಾ ಜಾಗತಿಕ ಮಟ್ಟದಲ್ಲಿ ನ್ಯಾಯಕ್ಕಾಗಿ ನಡೆವ ಹೋರಾಟದ ವಿಶಿಷ್ಟ…

  • ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ನೀರಿನ ಬವಣೆ…

    ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದ ಯಶಸ್ಸಿನ ಹಿಂದೆ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85% ಕಾರ್ಮಿಕರ ರು ಮಹಿಳೆಯರು ಎಂಬುದು ಗಮನಾರ್ಹ. ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ ಕೈಗಾರಿಕ ವಲಯ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಹಳ್ಳಿಗಳಿಂದ ವಲಸೆ ಬಂದಿರುವರಾಗಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ…

  • ‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ.

    ಆದಿವಾಸಿ ಹಕ್ಕುಗಳಿಗಾಗಿ ಹೋರಾಟ ಜಾಗತೀಕಣದ ಸದ್ಯದ ಪರಿಸ್ಥಿತಿಯಲ್ಲಿ, ಆದಿವಾಸಿಗಳು ಎದುರಿಸುತ್ತಿರುವ ಕಷ್ಟಗಳನ್ನು ಇತರೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಸಮುದಾಯಗಳು ಕೂಡ ಅನುಭವಿಸುತ್ತಿರುವುದು ವಾಸ್ತವ. ಸರ್ಕಾರ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಧಾಳಿಯಿಟ್ಟಿರುವ ಕಾರಣದಿಂದ ನೈಸರ್ಗಿಕ ಸಂಪನ್ಮೂಲಗಳು ನಂಬಿಕೊಂಡಿರುವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಮ್ಮ ನೀರಿನ ಮೂಲಗಳು, ಭೂಮಿ, ಅರಣ್ಯಗಳು ಹಾಗೂ ಸಮುದಾಯದ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಾವಿಂದು ಹೊಸದೊಂದು ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿದ್ದೇವೆಂದು ಹೇಳಬಹುದಾಗಿದೆ. ಇತ್ತೀಚೆಗೆ ‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ…

  • ಬಡವರ, ಹಿಂದುಳಿದವರ ಆಶಾಕಿರಣ – ಸರ್ಕಾರಿ ಕನ್ನಡ ಮಾದರಿ ಶಾಲೆಗಳು

    ಕನ್ನಡ ಕಲಿಕೆ ಕಾಣೆಯಾದೀತು ಜೋಕೆ! ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ 3,174 ಶಾಲೆಗಳನ್ನು ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಇದುವರೆಗೆ ರಾಜ್ಯದಲ್ಲಿ ಹತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು ಪ್ರಸಕ್ತ ಶೈಕ್ಷಣಿಕ ವರ್ಷತ್ಯಕ್ಕೆ ಮತ್ತಷ್ಟು ಶಾಲೆಗಳು ಬಾಗಿಲು ಮುಚ್ಚಲಿವೆ. ಸರ್ಕಾರಿ ಶಾಲೆಗಳಿಗೆ ವಿಧ್ಯಾರ್ಥಿಗಳು ಬರುತ್ತಿಲ್ಲ ಎಂಬ ನೆಪವೊಡ್ಡಿ, ಹಾಗಾಗಿ ಶಾಲೆಗಳನ್ನು ಮುಚ್ಚ ಬೇಕಾಗಿದೆ ಎಂಬ ಶಿಕ್ಷಣ ಸಚಿವರ ಹೇಳಿಕೆ ವಿವೇಚನೆಯಿಲ್ಲದ್ದು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಯಾವುದೇ…