Category: ಕನ್ನಡ
-
“ದಯವೇ ಧರ್ಮದ ಮೂಲವಯ್ಯ” ಗೋ ರಕ್ಷಕರಿಂದ ನರ ಹತ್ಯೆ
ನವೆಂಬರ್ 1 ರಂದು ನೆಲಮಂಗಲದ ಬಳಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಚಾಲಕ ಕೃಷ್ಣಪ್ಪನವರ ಕಗ್ಗೊಲೆ ಖಂಡನೀಯ. ಪ್ರಾಣಿ ದಯಾ ಸಂಘಕ್ಕೆ ಸೇರಿದ ಕಾರ್ಯಕರ್ತರು ಕೃಷ್ಣಪ್ಪರವರ ಮೇಲೆ ಹಲ್ಲೆ ನಡೆಸಿ ಫ್ಲೆ ಓವರ್ ನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿರುವುದಲ್ಲದೇ ಕ್ಲೀನರ್ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನಿಗೂ ಎಗ್ಗಮಗ್ಗ ಹೊಡೆದಿರುವುದು ಘೋರ ಅಪರಾಧ. ಇದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾನುವಾರು ಸಾಗಾಣಿಕೆ ವಿಷಯಗಳಲ್ಲಿ ಹಿಂದೂ ಸಂಸ್ಕೃತಿಯ ಸ್ವಯಂ ಘೋಷಿತ ಗುತ್ತಿಗೆದಾರರು ರಾಜಾರೋಷವಾಗಿ…
-
ಪರಿಸರ ಮಾರಕ-ಜೀವ ಮಾರಕ. ಅಣುಶಕ್ತಿಗೆ ಧಿಕ್ಕಾರ!
ರ್ಥಿಕ ಉನ್ನತಿಯ ಸನ್ನಿ ಹಿಡಿದಿರುವ ಭಾರತದ ಆಳುವ ವರ್ಗ ಮತ್ತು ಅವರ ಬಾಲಂಗೋಚಿ ಭಟ್ಟಂಗಿಗಳು ಮನಮೋಹನ್ ಸಿಂಗ್ರ ಆಡಳಿತದ 2ನೇಯ ಆವೃತ್ತಿ 2009 ಆವತರಣಿಕೆಯಾದ ಮೇಲೆ ಭಾರತ ಸೂಪರ್ ಪವರ್ ಆಗುವ ಮನಸ್ಸಿನ ಮಂಡಿಗೆಯನ್ನು ದೇಶದ ಎಲ್ಲಾ ಮೇಲ್ ಮಧ್ಯಮ ವರ್ಗದವರಿಗೆ ಉಣಬಡಿಸುತ್ತಿದ್ದಾರೆ. ಮನಮೋಹನ್-ಚಿದಂಬರಂ-ಪ್ರಣಬ್ ಮತ್ತು ಮಾಂಟೆಕ್ ಚತುಷ್ಪಾದ ಜೀವಿಗಳು ಶೇ.8-ಶೇ.9ರ ಅಭಿವೃದ್ಧಿ ಅಂಕಿಗಳ ದೊಂಬರಾಟಕ್ಕೆ ಈ ದೇಶದ ಸಾಮಾನ್ಯ ಬಹುಜನರ ಭವಿಷ್ಯವನ್ನೇ ಜೂಜಾಟದಲ್ಲಿ ತೊಡಗಿಸಿದ್ದಾರೆ. 2020ರ ಹೊತ್ತಿಗೆ ಭಾರತವನ್ನು ಬಂಡವಾಳಶಾಹಿ ಅಗ್ರ ಗುಂಪಿಗೆ ಎಳೆದೊಯ್ಯುವ ಪಣತೊಟ್ಟಿರುವ…
-
ವೋಲ್ವೋ : ಮತ್ತೋಮ್ಮೆ ಕಾರ್ಮಿಕರ ಮುಷ್ಕರ
ಆಡಳಿತ ಮಂಡಳಿಯ ಜೊತೆ ರಾಜ್ಯ ಬಿ.ಜೆ.ಪಿ. ಸರ್ಕಾರ ನೇರ ಶಾಮೀಲು ವೊಲ್ವೋ ಬಸ್ಸ್ ಇಂಡಿಯಾ ಪ್ರೈ.ಲಿ.ನ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸತತ 72 ದಿನಗಳ ಕಾಲ ನಡೆದ ಮುಷ್ಕರವನ್ನು ಕಾರ್ಮಿಕರು ತಾತ್ಕಾಲಿಕವಾಗಿ ಹಿಂತೆಗೆದು ಕೊಂಡಿದ್ದಾರೆ. ಒಂದು ವರುಷದ ಹಿಂದೆಯು ಸಹ ಇದೇ ಬೇಡಿಕೆಗಳಿಗಾಗಿ ನಡೆದ 22 ದಿನಗಳ ಮುಷ್ಕರ, ಕಾರ್ಮಿಕರ ಆಯೋಗದ ಸಂಧಾನದ ಮುಖಾಂತರ ಕೊನೆಗೊಂಡಿತ್ತು. ಪ್ರಾರಂಭವಾಗಿ ಮೂರುವರೆ ವರ್ಷಗಳೂ ಕಳೆದರೂ ಸ್ವೀಡನ್ನಿನ ಈ ಬಹು ರಾಷ್ಟ್ರೀಯ ಕಂಪನಿ-ವೊಲ್ವೋ ಬಸಸ್ ಇಂಡಿಯಾ ಪ್ರೈ…
-
‘ಅಖಿಲ ಭಾರತ ಮಾನವ ಅಭಿವೃದ್ಧಿ’ 2009-10 ವರದಿ
ಭಾರತದ ಆರ್ಥಿಕ ಪ್ರಗತಿ ? ಕೇವಲ ಉಳ್ಳವರ ಉನ್ನತಿ – ಹಿಂದುಳಿದವರ ಅಧೋಗತಿ ಭಾರತದ ಯುವಜನಾಂಗ ಅದರಲ್ಲೂ ಮೇಲ್ ಮಧ್ಯಮ ವರ್ಗದ ಜನರಲ್ಲಿ ಇಂದು ಪ್ರಚ್ಛನ್ನ ಜಾತೀಯತೆ ಮತ್ತಷ್ಟು ಕುದಿಯುತ್ತಿದೆ. ಕಾಲೇಜು ಯುವಕ ಯುವತಿಯರನ್ನು ಮಾತಿಗೆಳೆದರೆ ತಮ್ಮಲ್ಲಿ ಹುದುಗಿರುವ ಜಾತೀಯತೆಯನ್ನು ಹೊರಹಾಕುತ್ತಾರೆ. ಮೀಸಲಾತಿಯಿಂದ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಹಿಂದುಳಿದ ಜಾತಿ, ಪಂಗಡ, ಹಾಗೂ ಮುಸ್ಲಿಮರು ಅವಕಾಶಗಳನ್ನು ಬಾಚಿ ನಮ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವುದಲ್ಲದೇ ನಮ್ಮ ಪ್ರತಿಭೆಗೆ ಅಡ್ಡ ಬರುತ್ತಿದ್ದಾರೆಂದು ಮೀಸಲಾತಿಯ ಬಗೆಗೆ ಕಿಡಿಕಾರುತ್ತಾರೆ. ತಳ ಸಮುದಾಯದ ಜನರು ಮೀಸಲಾತಿಯಿಂದ…
-
ರಥಯಾತ್ರೆಯೂ ತಿರುಕನ ಕನಸೂ…………….!
ಹೋಲಿಕೆಗಳು ರಾಜಕೀಯದಲ್ಲಿ ಸಾಮಾನ್ಯವಾದರೂ ಅಪೇಕ್ಷಿತವಲ್ಲ. ಆದರೆ ಇಂದಿನ ಎಡಬಿಡಂಗಿ ರಾಜಕಾರಣ, ಆರವತ್ತು -ಎಪ್ಪತ್ತರ ದಶಕಗಳ “ತರುಣರಿಗೆ”, ಶಾಲೆಗಳಲ್ಲಿ ಕಲಿತ ಪಾಠ-ಪದ್ಯಗಳನ್ನು ಬೇಡೆಂದರೂ ನೆನಪಿಸುತ್ತದೆ. ಆದ್ವಾನಿಯವರ ಇತ್ತೀಚಿನ ರಥಯಾತ್ರೆ “ತಿರುಕನೋರ್ವನೂರ ಮುಂದೆ ಮುರುಕು ಧರ್ಮ ಶಾಲೆಯಲ್ಲಿ………….. ಕನಸ ಕಂಡನೆಂತೆನೆ” ಪದ್ಯವನ್ನು ನೆನಪು ಮಾಡುತ್ತದೆ. ‘ತಿರುಕ’ ಪದದ ಉಲ್ಲೇಖ ಇಲ್ಲಿ ತಿರುಗಾಟದಲ್ಲಿ ತೊಡಗಿರುವವರು ಎಂಬ ಅರ್ಥವನ್ನೂ ಕೊಡುತ್ತದೆ. ಮೇಲಾಗಿ ನನ್ನನ್ನು ಪ್ರಧಾನಿಯಾಗಿಸಿಬಿಡಿ ಎಂದು ಅಂಗಲಾಚುತ್ತಿರುವ ಆದ್ವಾನಿಯವರ “ಬೇಡಿಕೆ”, ಪದ್ಯದ ತಿರುಕನ ದಯನೀಯ ಪರಿಸ್ಥಿತಿಗಿಂತ ಭಿನ್ನವೇನಲ್ಲ. ಬಿ.ಜೆ.ಪಿ. ಎಂಬ “ಮುರುಕು” ಧರ್ಮಶಾಲೆಯಲ್ಲಿ,…
-
ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಎಲ್ಲಾ ಮೇಧಾವಿಗಳಿಗೂ ಒಂದು ಮುಕ್ತ ಅರಿಕೆ…….
ಮಾನ್ಯ, ಡಾ. ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್, ಪ್ರಣಬ್ ಮುಖರ್ಜಿ, ಪ.ಚಿದಬಂರಮ್ ಮತ್ತು ಭಾರತದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ಸಮಸ್ತ ಆಳುವ ವರ್ಗದ ಪ್ರತಿಷ್ಠಿತರೇ, ನಿಮ್ಮಲ್ಲೇ ಒಬ್ಬರಾದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾರವರು ಮಂಡಿಸಿದ, ಪ್ರತಿ ನಗರವಾಸಿ ಪ್ರಜೆ, 32 ರೂಪಾಯಿಗಳನ್ನು ಗಳಿಸಿದಲ್ಲಿ ಅವನು/ಅವಳು ಬಡತನ ರೇಖೆಗಿಂತ ಮೇಲಿರುವವರು ಎಂಬ ಮಾನದಂಡ ಈ ದೇಶದ ಶೇ.90 ಕ್ಕಿಂತ ಹೆಚ್ಚಿರುವ ನನ್ನಂತಹ ಸಾಧಾರಣ ದುಡಿಯುವ ವರ್ಗದ ಜನರಿಗೆ ಅತೀವ ಸೋಜಿಗದ ಸಂಗತಿಯಾಗಿದೆ. ಹೇಳಿ ಕೇಳಿ ನಾವುಗಳು…